Monday, December 28, 2009

ಸಾವಯುವ ಯೂರಿಯಾ


ಮನೆಯಲ್ಲಿ ಸುಲಭವಾಗಿ ತಯಾರಿಸಿ ಕೊಳ್ಳಬಹುದಾದ ಸಾವಯುವಯೂರಿಯಾಬಗ್ಗೆ ಮಾಹಿತಿ ತಮಗೆ ನೀಡಲು ತಿರುಮಲೆಶ್ ಬೆಳಗುಂದ್ಲಿ ರವರ ಒಪ್ಪಿಗೆ ಮೆರೆಗೆ ಅವರ ಬ್ಲಾಗ್ www.samagrakrushi.blogspot.com ನಿಂದ ಲೇಖನ ಆಯ್ದುಕೊಳ್ಳಲಾಗಿದೆಗೆಳೆಯರೆ, ನಾನು ಈ ಹಿಂದೆ ಪಶುಗಳ ಆಹಾರ ಪದ್ದತಿಯಲ್ಲಿ 50+50 ನೇಪಿಯರ್ ಹುಲ್ಲು ಮತ್ತು ದ್ವಿದಳ ಮೇವು ಎಂದು ಹೇಳಿದ್ದೆ. ಆದರೆ ಅವುಗಳ ಆರೋಗ್ಯದ ದೃಷ್ಟಿಯಿಂದ 75% ನೇಪಿಯರ್ ಗ್ರಾಸ್+ 25%ದ್ವಿದಳ ಮೇವು ಹಾಕಬೇಕು.
ಅಂದಹಾಗೆ, ಪಶು ಸಂಗೋಪನೆಯಿಂದ ತಯಾರಿಸ ಬಹುದಾದ ಉಪ ಉತ್ಪನ್ನಗಳ ಬಗ್ಗೆ ತಿಳಿಸುತ್ತೇನೆ ಅಂತ ಹೇಳಿದ್ದೆ.
ಪಶು ಸಂಗೋಪನೆಯಿಂದ ಉಪ ಉತ್ಪನ್ನ- 1) ಜೈವಿಕ ಯೂರಿಯಾ(ನೈಟ್ರೆಟ್).
ಪ್ರತಿಯೊಂದು ಬೆಳೆಯೂ ಸಮೃದ್ಧವಾಗಿ ಬೆಳೆಯಬೆಕಾದರೆ ನೈಟ್ರೆಟ್ ಎಷ್ಟು ಮುಖ್ಯ ಎಂಬುದು ನಿಮಗೆ ತಿಳಿದಿದೆ. ಸಾ
ಮಾನ್ಯವಾಗಿ ಮನೆಯ ಹಿತ್ತಲಲ್ಲಿ ಬೆಳೆಯುವ ತರಕಾರಿಗಳಿಗೋ, ಹೂವಿನ ಗಿಡಗಳಿಗೋ, ತಿಂಗಳಿಗೊಮ್ಮೆ 10%ಗೋಮೂತ್ರವನ್ನು ಬುಡಕ್ಕೆ ಹಾಕುವ ಮೂಲಕ ನಮ್ಮ ತಾಯಂದಿರು ಚೆನ್ನಾಗಿ ಬೆಳೆ ಬೆಳೆಯುತ್ತಾರೆ.
ಆದರೆ, ಹೆಕ್ಟೇರು ಗಟ್ಟಲೆ ಇರುವ ತೋಟ ಅಥವಾ ಗದ್ದೆಗಳಿಗೆ ಈ ರೀತಿ ಸಾಧ್ಯವಿಲ್ಲ. ಒಂದೆರಡು ವಾರಕ್ಕೆ ಇದಕ್ಕೆ ಬೇಕಾದಷ್ಟು ಗೋಮೂತ್ರ ಸಿಗುವುದಿಲ್ಲ. ಆದ್ದರಿಂದ ರಾಸಾಯನಿಕ ಯೂರಿಯಾ ಬಳಸುತ್ತೇವೆ . ಆದರೆ ಇವತ್ತಿನ ದಿನದಲ್ಲಿ ಸಾವಯವ ಕೃಷಿ ಬಗ್ಗೆ ಜನರ ಒಲವು ಹೆಚ್ಚಾಗ ತೊಡಗಿದೆ. ಆದರೆ, ಬೆಳೆಗಳಿಗೆ ಹಿಂದೆ ರಾಸಾಯನಿಕ ನೈಟ್ರೆಟ್ ಕೊಡುತ್ತಿದ್ದೆವು. ಅದರೆ ಈಗ? ಸಾವಯವ ಕೃಷಿಕರು ರಾಸಾಯನಿಕ ಬಳಸದೆ, ಯೂರಿಯಾವನ್ನು ತಯಾರಿಸಿಕೊಳ್ಳುವುದು ಹೇಗೆ?
ಒಂದು ಕೆಲಸ ಮಾಡಿ,. ಒಂದು ಚೀಲದಷ್ಟು ಉಸುಕನ್ನು ಸಿಮೆಂಟಿನ ತೊಟ್ಟಿ ಅಥವಾ ಪ್ಲ್ಯಾಸ್ಟಿಕ್ ಅಳವಡಿಸಿದ ಸಣ್ಣ ತೊಟ್ಟಿಯಲ್ಲಿ, ತುಂಬಿಸಿ. ನಂತರ ದಿನಾಲೂ ಕೋಟ್ಟಿಗೆಯಲ್ಲಿ ಸಂಗ್ರಹವಾದಷ್ಟು ಗಂಜಲವನ್ನು ಉಸುಕಿನ ಮೇಲೆ ಸುರಿಯುತ್ತಿರಿ. ಏಳು ದಿನಗಳ ವರೆಗೆ ಹೀಗೆ ಮುಂದುವರೆಸಿ. ಅಲ್ಲಿಗೆ ಉಸುಕಿನ ಬಣ್ಣ ಕಪ್ಪಗಾಗಿರುತ್ತದೆ. ಆಗ ಅದನ್ನು ತೆಗೆದು, ನೆರಳಿನಲ್ಲಿ ಚನ್ನಾಗಿ ಒಣಗಿಸಿ
. ಈಗ ಜೈವಿಕ ಯೂರಿಯ(ನೈಟ್ರೆಟ್) ತಯಾರಾಯಿತು. ಇದನ್ನು ಚೀಲದಲ್ಲಿ ತುಂಬಿ ಬೆಚ್ಚನೆ ಸ್ಥಳದಲ್ಲಿ ಇಟ್ಟುಕೊಂಡು ಬೇಕಾದಾಗ ಉಪಯೋಗಿಸಬಹುದು.
ಇದನ್ನು ಉಪಯೋಗಿಸುವ ಪ್ರಮಾಣದಲ್ಲಿ "ಸ್ವಲ್ಪ" ಹೆಚ್ಚು ಕಡಿಮೆ ಆದರೂ ಮಣ್ಣು ಕೆಡುವದಿಲ್ಲ. ಹಾಗಂತ ಒಮ್ಮೆಲೇ ಅತಿಯಾದ ಬಳಕೆಯಿಂದ ಬೆಳೆಗಳ ಮೇಲೆ ಅದರದ್ದೇ ಆದ ಪರಿಣಾಮ ಇದ್ದೇಇರುತ್ತದೆ ಎಂಬುದು ನೆನಪಿರಲಿ.! ರಾಸಾಯನಿಕ ಯೂರಿಯಾ ಕೊಟ್ಟಷ್ಟೇ ಚನ್ನಾಗಿ ಬೆಳೆ ಬೆಳೆಯುತ್ತದೆ.
ರಾಸಾಯನಿಕ ಯೂರಿಯಾ ಕೊಟ್ಟ ಪೈರಿಗೂ ಜೈವಿಕ ಯೂರಿಯಾ ಕೊಟ್ಟ ಪೈರಿಗೂ ಹೋಲಿಕೆ ಮಾಡಿದಾಗ ಜೈವಿಕ ನೈಟ್ರೆಟ್ ಕೊಟ್ಟ ಬೆಳೆಗೆ ರೋಗಭಾದೆ ಸ್ವಲ್ಪ ಕಡಿಮೆ ಇರುತ್ತದೆ. ಇದರಿಂದ ಮಣ್ಣಿನ ಪಲವತ್ತತೆ+ ಸಮೃದ್ದ ಇಳುವರಿ= ಒಳ್ಳೆಯ ಆದಾಯ.!!!
ಮುಂದಿನ ದಿನಗಳಲ್ಲಿ ಗೋಅರ್ಕದ ಬಗ್ಗೆ ತಿಳಿಸುತ್ತೇನೆ.
ನಿಮ್ಮ ಯಾವುದೆ ಸಲಹೆ ಸೂಚನೆಗಳಿದ್ದಲ್ಲಿ ಯಾವತ್ತೂ ನಮ್ಮ ಸಹಕಾರವಿದೆ. 9482188458 ಗೆ ಅಥವಾ tirumalesh82@gmail.com ಗೆ ತಿಳಿಸಬಹುದು.

No comments:

Post a Comment