Monday, October 19, 2009

ಸಾವಯವ ಕೃಷಿ ಒಂದು ಚಿಂತನೆ


ಸಕಾಲಕ್ಕೆ ದೊರಕದ ರಸ ಗೊಬ್ಬರ, ಸಾವಯವ ಕೃಷಿಬಗ್ಗೆ ಸರಕಾರಗಳ ಯೋಜನೆ,ಕೃಷಿ ಪಂಡಿತರ ಸಂಶೋಧನೆ,ಕಡಿಮೆ ಖರ್ಚಿನಲ್ಲಿ ಬೆಳೆತೆಗೆದು ಗೆದ್ದ ಸಾವಯವ ರೈತರ ಯಶೋಗಾಥೆ ಒಂದೆಡೆಯಾದರೆ, ತಲೆತಲಾಂತರದಿಂದ ಸಾವಯವಮಾಡಿಕೊಳ್ಳುತ್ತಾ ಬಂದ ಕೃಷಿಕನಿಗೆ ಇಂದು ಯಾವ ಪದ್ದತಿ ಕೃಷಿ ಕಡಿಮೆ ಖರ್ಚಿನಲ್ಲಿಲಾಭದಾಯಕ ಎಂಬ ಗೊಂದಲದಲ್ಲಿದ್ದಾನೆ. ಪದ್ಧತಿ ಗೊತ್ತಿದ್ದರೂ ಎಲ್ಲೋ ಎಡುವುತ್ತಿದ್ದಾನೆ.ಸೋಲುತ್ತಿದ್ದಾನೆ. ರೈತ ಮಿತ್ರರೇ ಕೃಷಿಯಲ್ಲಿ ನಮಗೆ ನಾವೇ ಗುರು ಆಗಲೇಬೇಕಿದೆ. ಅನಿವಾರ್ಯಕೂಡಾ.ಪ್ರಸ್ತುತ ಬೆಲೆ ಏರಿಕೆಯ ದಿನಗಳಲ್ಲಿ,ಕೆಲಸಗಾರರ ಕೊರತೆಯ ನಡುವೆ ಲಾಭದಾಯಕ ಕೃಷಿ ಕಷ್ಟವೇ ಸರಿ,ಆದರೆ ಇದರ ಜೊತೆ ಏಗಲೇ ಬೇಕು.ಸರಕಾರದಿಂದ ಬಂದ ಕೃಷಿ ಸಲಕರಣೆ,ಗೊಬ್ಬರ,ಬೀಜಗಳು ತರಹೆವಾರಿ ಯೊಜನೆ ರಾಜ್ಯದ ಎಲ್ಲ ರೈತರಿಗೂ ತಲುಪಲು ಸಾಧ್ಯವೇ ಇಲ್ಲ. ಯಾರ ಬಳಿಯೂ ಕೈಚಾಚದೆ ಸ್ವಾವಲಂಬಿ ಬದುಕು ನಮ್ಮದಾದರೆ ಎಷ್ಟು ಚೆನ್ನ ಅಲ್ಲವೆ.? ಕೃಷಿ ಒಂದು ಆರಾಧನೆ,ಭೂಮಿತಾಯಿಯೊಂದಿಗೆ ಶ್ರದ್ಧೆ,ಪ್ರೀತಿ, ಸಹನೆಯಿಂದ ಬೇಸಾಯ ಮಾಡಿದಲ್ಲಿ ಬೆಳೆ "ಕೈಗೆ ಹತ್ತುವದು" ಖಚಿತ.ಆದರೆ ಅದನ್ನು ಒಂದು ತಪಸ್ಸಿನಂತೆ ನೆಡೆಸಿಕೊಂಡು ಹೋಗಬೇಕು.ಯಾವುದೋ ಒಂದು ಪ್ರದೇಶದಲ್ಲಿ ಕೃಷಿ ಗೆದ್ದಲ್ಲಿ ಅದು ಅಲ್ಲಿನ ವಾತಾವರಣ,ಬೇಸಾಯ ಪದ್ಧತಿ ಮೇಲೆ ಅವಲಂಬಿಸಿರುತ್ತದೆ.ಹಾಗಾಗಿ ಆ ರೈತ ತಯಾರಿಸಿದ ಗೊಬ್ಬರ ಎಲ್ಲರ ತೋಟದಲ್ಲಿ ಕೆಲಸಮಾಡದಿರಬಹುದು.ಕಾರಣವಿಷ್ಟೆ ಮಣ್ಣಿನ ರಚನೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಗಿರುತ್ತದೆ.ಇದನ್ನು ರೈತರಾದ ನಾವೇ ಪರೀಕ್ಷಿಸಿ ಭೂಮಿಗೆ ಅಳವಡಿಸಿಕೊಳ್ಳಬೇಕು.ಸಾವಯವ ಎಂದರೆ ಯಾವುದೇ ರಾಸಾಯನಿಕ ಗೊಬ್ಬರ,ಕೀಟ ಹಾಗೂ ಕ್ರಿಮಿನಾಶಕ ಬಳಸದೇ ಕೇವಲ ನೈಸರ್ಗಿಕವಾಗಿ ದೊರಕುವ ವಸ್ತುಗಳಿಂದ ತಯಾರಿಸಿದ ಗೊಬ್ಬರ ಬಳಸುವದಾಗಿದೆ.ಯಾವುದೇ ಕೃಷಿ ಪದ್ಧತಿ ಆದರೂ ಸರಿ ರಾಸಾಯನಿಕ ಬಳಸದಿದ್ದರೆ ಆಯಿತು.ಭೂಮಿಗೆ ವಿಷ ಊಡಿಸಿದಲ್ಲಿ ಅದು ತಿರುಗಿ ನಿಧಾನವಾಗಿ ನಮ್ಮ ಅನ್ನದ ಬಟ್ಟಲಿಗೇ ಬರುವದು.ಹೊಸ ಬಗೆಯ ರೋಗಗಳು ಬರುತ್ತಿವೆ.ಜನರಲ್ಲಿ ರೋಗನಿರೋಧಕಶಕ್ತಿ ಕಡಿಮೆ ಆಗುತ್ತಿದೆ.ಸ್ವಸ್ಥ ಪರಿಸರ,ಆರೊಗ್ಯಕ್ಕೆ ಸಾವಯುವಕೃಷಿ ಪದ್ಧತಿ ಒಂದೇ ಪರಿಹಾರ. ಸಾವಯವ ಕೈಗೊಂಡಲ್ಲಿ ಆ ಪ್ರದೇಶದ ಮಣ್ಣು ಫಲವತ್ತತೆ ಹೊಂದುತ್ತದೆ ತನ್ಮೂಲಕ ಗಿಡದ ಆಂತರಿಕ ಬೆಳವಣಿಗೆಗೆ ಸಹಕಾರಿ ಯಾಗುತ್ತದೆ.ಮುಚ್ಚಿಗೆ ಒದಗಿಸಿದಲ್ಲಿ ಕಡಿಮೆ ನೀರು ಸಾಕು.ಜೊತೆಗೆ ಮಿಶ್ರಬೇಸಾಯ ಮಾಡಿದಲ್ಲಿ ರೋಭಾದೆ ಕೂಡಾ ಕಡಿಮೆ ಆದ ಉದಾಹರಣೆ ಇದೆ.ಪೃಕೃತಿಯು ತನ್ನದೇ ಆದ ಸರಪಳಿ ಹೊಂದಿದ್ದು ನಮೆಗೆ ತಿಳಿದೇ ಇದೆ.ನಾವು ಅದನ್ನು ಹಾಳುಗೆಡುಹದೇ ಮುಂದಿನ ಪೀಳಿಗೆಯವರಿಗೂ ಉಳಿಸಿಕೊಂಡು ಹೋಗುವದು ನಮ್ಮ ಜವಾಬ್ದಾರಿಯಾಗಿದೆ.

1 comment:

  1. ಜಗದೀಶ್...

    ಇಂದಿನ ರೈತರ ಸಮಸ್ಯೆಗಳನ್ನು ಎತ್ತಿ ಹೇಳುತ್ತ...
    ಪರಿಹಾರವನ್ನೂ ತಿಳಿಸಿದ್ದೀರಿ...

    ಸಾವಯವ ಕೃಶಿಯಲ್ಲಿ ಯಾವುದೇ ರಾಸಾಯನಿಕಗಳಿರುವದಿಲ್ಲ...
    ಪರಿಸರ ಪ್ರೇಮಿ ಕೂಡ...

    ಜನಜಾಗ್ರತಿಯಾಗಬೇಕು...
    ನಿಮ್ಮ ಕಳಕಳಿಗೆ ಅಭಿನಂದನೆಗಳು....

    ReplyDelete