ಉಳ್ಳವರು ಪ್ರೇಮಿಸುವರಯ್ಯಾ..
ನಾನೇನು ಮಾಡಲಿ ಈ ದೇಶದ ಬಡ ರೈತನಯ್ಯಾ...
ಕೂಲಿ ಸಮಸ್ಯೆ.. ಬೆಲೆ ಏರಿಕೆ..
ಬೆಳೆದ ಬೆಳೆಗೆ .. ನಮ್ಮ ಪರಿಶ್ರಮಕೆ ಬೆಲೆ ಇಲ್ಲವಯ್ಯಾ...
ದುಡಿದಷ್ಟೂ ಸಾಲದ... ಸಾಲದ ಹೊರೆ...
ಆತ್ಮಹತ್ಯೆಯೊಂದೇ ದಾರಿಯಯ್ಯಾ...
ಉಳ್ಳವರು ಪ್ರೇಮಿಸುವರಯ್ಯಾ...
ನಾನೇನು ಮಾಡಲಿ ಈ ದೇಶದ ರೈತನಯ್ಯಾ.
ಶ್ರೀಯುತ ದಿಗ್ವಾಸ್ ಹೆಗಡೆಯವರ
ಚಿತ್ರಪಟ ಪೋಟೋ ಬ್ಲಾಗ್ ನ ಈ ಚಿತ್ರ
ಇಟ್ಟಿಗೆಸಿಮೆಂಟು ಬ್ಲಾಗ್ ನ ಶ್ರೀಯುತ ಪ್ರಕಾಶ್ ಹೆಗಡೆಯವರು ಬರೆದ ಈ ಮೇಲಿನ ಪ್ರತಿಕ್ರಿಯೆ ನಿಜಕ್ಕೂ ಪ್ರಸ್ತುತಕ್ಕೆ ಹಿಡಿದ ಕನ್ನಡಿಯಾಗಿದೆ.
ಇವರಿಬ್ಬರಿಗೂ ನನ್ನ ಹಾರ್ದಿಕ ಅಭಿನಂದನೆಗಳು.
ಜಗದೀಶ ಬಾಳೆಹದ್ದ.